ಮತ್ತೆ ಹಾಡಿತು ಕೋಗಿಲೆ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು    ಎಚ್. ಆರ್. ಭಾರ್ಗವ ಇದನ್ನು ನಿರ್ದೇಶಿಸಿದ್ದಾರೆ. ಇದನ್ನು ಎಸ್.ಶಂಕರ್ ನಿರ್ಮಿಸಿದ್ದಾರೆ.  ಇದರ ಪ್ರಮುಖ ಪಾತ್ರಗಳಲ್ಲಿ ವಿಷ್ಣುವರ್ಧನ್, ಬೇಬಿ ಶ್ಯಾಮಿಲಿ, ಅನಂತನಾಗ್, ಭವ್ಯ ಮತ್ತು ರೂಪಿಣಿ  ಇದ್ದಾರೆ. ಅಂದಿನ ಸೂಪರ್ ಸ್ಟಾರ್ ಗಳಾದ ಅನಂತನಾಗ್ ಮತ್ತು ವಿಷ್ಣುವರ್ಧನ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ಅಭಿನಯಿಸಿದ್ದಾರೆ. (ಕೆಲವು ವರ್ಷಗಳ ನಂತರ ಅವರು ಮತ್ತೆ ಒಟ್ಟಾಗಿ "ನಿಷ್ಕರ್ಷ" ಚಿತ್ರದಲ್ಲಿ ಅಭಿನಯಿಸಿದರು).
ನಿರ್ದೇಶಕ ಭಾರ್ಗವ ಅವರು ತಿಳಿಸಿದಂತೆ, ಅವರು ತಾವು ಕೂಡ ನಿರ್ಮಾಣದಲ್ಲಿ ಭಾಗಿಯಾಗಿದ್ದ "ನಾ ನಿನ್ನ ಮರೆಯಲಾರೆ" ಚಿತ್ರವನ್ನು ಬಹಳ ಇಷ್ಟ ಪಟ್ಟಿದ್ದು , ಚಿ. ಉದಯಶಂಕರ್ ಅವರನ್ನು ಅಂತಹದೇ ಮತ್ತೊಂದು ಚಿತ್ರಕಥೆ ( ಬೈಕ್ ಅನ್ನು ಸದಾ ಸಂಗಾತಿಯಾಗಿ ಹೊಂದಿರುವ ನಾಯಕ ಮತ್ತು ನಾಯಕಿಯರ ದುರಂತ ಪ್ರೇಮಕಥೆ)ಗಾಗಿ ಕೇಳಿಕೊಂಡರು. ಆಗ ಚಿ. ಉದಯಶಂಕರ್ ಅವರು ತಾವು ರಾಜಕುಮಾರ್ ಅವರಿಗಾಗಿ ಬರೆದಿದ್ದ , ಆದರೆ ಅದಾಗಲೇ ಅಂತಹದೊಂದು ಕತೆಯ  ಚಿತ್ರ  "ದೇವರ ಮಕ್ಕಳು " ಅನ್ನು ಮಾಡಿರುವ ಕಾರಣ ರಾಜಕುಮಾರ್ ಅವರು ತಿರಸ್ಕರಿಸಿದ್ದ ಕಥೆಯನ್ನು ಅವರಿಗೆ ಕೊಟ್ಟರು.

ಪಾತ್ರವರ್ಗ 

ವಿಷ್ಣುವರ್ಧನ್ ಆನಂದ್ ಆಗಿ
ಅನಂತನಾಗ್  ಪ್ರಸನ್ನಕುಮಾರ್ ಆಗಿ
ಭವ್ಯ  ಕವಿತಾ ಆಗಿ
 ರೂಪಿಣಿ  ಸಂಗೀತಾ ಆಗಿ
ಬೇಬಿ ಶ್ಯಾಮಿಲಿ ಪಲ್ಲವಿ ಆಗಿ
ಸವಿತಾ ಪಾತ್ರದಲ್ಲಿ ಸತ್ಯಶ್ರೀ
 ಮುಖ್ಯಮಂತ್ರಿ ಚಂದ್ರು  ಪ್ರದೀಪ್ ಆಗಿ
ರಮೇಶ್ ಭಟ್ ಗೋಪಾಲ್ ಆಗಿ
ವಿಶ್ವಪ್ರಸಾದ ಆಗಿ ಅಶೋಕ್ ರಾವ್
 ದೊಡ್ಡಣ್ಣ  ಸಂತೋಷ್  ಆಗಿ

ಹಾಡುಗಳು
ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದವರು ರಾಜನ್-ನಾಗೇಂದ್ರ ಮತ್ತು ಹಾಡುಗಳನ್ನು ಬರೆದವರು ಚಿ.ಉದಯಶಂಕರ್.

ಉಲ್ಲೇಖನಗಳು

ವರ್ಷ-೧೯೯೦ ಕನ್ನಡಚಿತ್ರಗಳುವಿಷ್ಣುವರ್ಧನ್ ಚಲನಚಿತ್ರಗಳು
ಅಶೋಕ ಚಕ್ರ, ಬಿ.ರಾಮಮೂರ್ತಿ ನಿರ್ದೇಶನ ಮತ್ತು  ಎಂ.ರಾಜೇಂದ್ರ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಮನೋರಂಜನ್ ಪ್ರಭಾಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್, ಶಶಿಕುಮಾರ್ ಮತ್ತು ಸುಧಾರಾಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ

ವರ್ಷ-೧೯೯೦ ಕನ್ನಡಚಿತ್ರಗಳು

ಪಾತ್ರವರ್ಗ
ನಾಯಕ(ರು) = ಪ್ರಭಾಕರ್, ಶಶಿಕುಮಾರ್
ನಾಯಕಿ(ಯರು) = ಸುಧಾರಾಣಿ
ತ್ಯಾಗರಾಜ್

ಹಾಡಗಳು

{| class="wikitable"
|-
! ಕ್ರಮ ಸಂಖ್ಯೆ
! ಹಾಡು
! ಗಾಯಕರು
|-
| 1
| ಪ್ರೀತಿಯ ಮರೆತು
| ಮಂಜುಳಾ ಗುರು
|-
| 2
| ಸಂಗಾತಿ ನಿನ್ನ ಕಂಡೆ
| ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರು
|-
| 3
| ಹಾಡೋನ ಇಲ್ಲೇ
| ರಮೇಶ್, ಮಂಜುಳಾ ಗುರು
|-
| 4
|  ನ್ಯಾಯ ಸಿರಿಯಲ್ಲಿ 
| ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಎಸ್ ಚಿತ್ರಾ
|-
ಅಶೋಕ ಚಕ್ರವು ಸಾಮ್ರಾಟ್ ಅಶೋಕನ ಚಿಹ್ನೆಯಾಗಿದ್ದು,ಭಾರತದ ಧ್ವಜದಲ್ಲಿ ಅಳವಡಿಸಿಕೊಳ್ಳಲಾಗಿದೆ.ಅಶೋಕಚಕ್ರದಲ್ಲಿ ವೃತ್ತಾಕಾರದ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ,ಚಕ್ರದಲ್ಲಿನ ೨೪ ಕಂಬಗಳು ಬೌದ್ಧಧರ್ಮದ ಆಚರಣೆಯನ್ನು ಸೂಚಿಸುತ್ತವೆ.

ಪ್ರಾಚ್ಯ ಹಾಗೂ ಪಾಶ್ಚಾತ್ಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ಈ ಚಕ್ರ ಅಶೋಕ ಮಹಾರಾಜನಿಂದ ಸಾರಾನಾಥದಲ್ಲಿ ನಿರ್ಮಾಣವಾದ ಸ್ಮಾರಕಸ್ತಂಭದ ಸಿಂಹಶೀರ್ಷಿಕೆಯಲ್ಲಿದೆ. ಅಶೋಕ ಸಾರಾನಾಥದ ಸ್ತಂಭವನ್ನು ಚೂನಾರ್ ಪರ್ವತಗಳ ಕಲ್ಲಿನಲ್ಲಿ ಅತ್ಯಂತ ಸುಂದರವಾಗಿ ಕಡೆಸಿ ಸಾರಾನಾಥದಲ್ಲಿ ಸ್ಥಾಪಿಸಿ, ಅದರ ತುದಿಯನ್ನು ಧರ್ಮ ಚಕ್ರವನ್ನೊಳಗೊಂಡ ಸಿಂಹ ಶೀರ್ಷಿಕೆಯಿಂದಲಂಕರಿಸಿದ. ಅವನ ಆಳ್ವಿಕೆಯ ಅನಂತರ ಶತಮಾನಗಳ ಮೇಲೆ ಭಾರತವನ್ನು ಸಂದರ್ಶಿಸಿದ ಚೀನ ದೇಶದ ಬೌದ್ಧಯಾತ್ರಿಕ ರಾದ ಫಾಹಿಯಾನ್, ಯುವಾನ್ಚಾಂಗ್ ಮತ್ತು ಇತ್ಸಿಂಗ್-ಇವರು ಸಾರಾನಾಥದ ಸ್ತಂಭವನ್ನು ನೋಡಿ ವಿಸ್ಮಿತರಾಗಿ, ಈ ಕೃತಿ ದೇವ ಶಿಲ್ಪಿಗಳಿಂದ ನಿರ್ಮಾಣ ವಾಗಿರಬೇ ಕೆಂದು ಅಭಿಪ್ರಾಯ ಪಟ್ಟರು. ಪಾಶ್ಚಾತ್ಯ ವಿದ್ವಾಂಸ ವಿನ್ಸೆಂಟ್ ಸ್ಮಿತ್ ಈ ಸ್ಮಾರಕವನ್ನು ವಿವರಿಸುತ್ತ ಶಿಲ್ಪಕಲೆ ಮೌರ್ಯರ ಕಾಲದಲ್ಲಿ ಸರ್ವೋತ್ಕೃಷ್ಟ ಮಟ್ಟವನ್ನು ಮುಟ್ಟಿತೆಂದೂ ಇಪ್ಪತ್ತನೆಯ ಶತಮಾನದಲ್ಲೂ ಎಣೆಯಿಲ್ಲದ ಶಿಲ್ಪಕಲಾಕೃತಿಯಾಗಿ ಉಳಿದಿದೆ ಯೆಂದೂ ಅಭಿಪ್ರಾಯ ಪಟ್ಟಿದ್ದಾನೆ. ಪ್ರಾಕ್ತನಶಾಖೆಯ ನಿರ್ದೇಶಕ ಮಾರ್ಷಲ್, ಸಾರಾನಾಥ ಸ್ಮಾರಕ ಪ್ರಾಚೀನ ಭಾರತದ ಶಿಲ್ಪಕಲೆಯ ಅತ್ಯಂತ ಶ್ರೇಷ್ಠವಾದ ಕೃತಿಯೆಂದು ಅಭಿಪ್ರಾಯಪಟ್ಟಿದ್ದಾನೆ.

ಬೌದ್ಧಧರ್ಮ ಭಾರತದಲ್ಲಿ ಕ್ಷೀಣಿಸಿದ ಅನಂತರ ಸಾರಾನಾಥ ಪಟ್ಟಣ ಹಾಳಾಯಿತು; ಅಶೋಕನ ಸ್ತಂಭ ಮುರಿದು ಬಿತ್ತು. 18 ಮತ್ತು 19ನೆಯ ಶತಮಾನಗಳಲ್ಲಿ ನಡೆದ ಪ್ರಾಚ್ಯ ಸಂಶೋಧನೆಯ ಕಾಲದಲ್ಲಿ ಸಾರಾನಾಥದ ಅವಶೇಷಗಳು ಬೆಳಕಿಗೆ ಬಂದವು. ಕಂಬ ಮುರಿದು ಬಿದ್ದಾಗ ಚಕ್ರವನ್ನೊಳಗೊಂಡ ಸಿಂಹಶೀರ್ಷ ಸ್ವಲ್ಪಮಟ್ಟಿಗೆ ಹಾನಿಗೊಳಗಾದರೂ ತೀರ ಭಿನ್ನವಾಗದೆ ತನ್ನ ಸೌಂದರ್ಯ ವನ್ನುಳಿಸಿಕೊಂಡಿದೆ. ಸ್ತಂಭ ಸು. 50 ಅಡಿ ಎತ್ತರವಾಗಿದ್ದಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ಸಿಂಹಶೀರ್ಷದ ಕೆಳಭಾಗದಲ್ಲಿ ಗಂಟೆಯಾಕಾರದ ಒಂದು ಕಮಲಪುಷ್ಪವನ್ನು ಕೆತ್ತಲಾಗಿದೆ. ಇದು 2'ಗಳಷ್ಟು ಎತ್ತರವಾಗಿದೆ. ಅರಳಿದ ಕಮಲ ಹದಿನಾರು ದಳಗಳನ್ನು ಕೆಳಭಾಗಕ್ಕೆ ಒತ್ತಿಹಿಡಿದಂತೆ ಕೆತ್ತಲಾಗಿದೆ. ಗಂಟೆಯ ಆಕಾರದಲ್ಲಿ ಕೆತ್ತಲಾಗಿರುವ ಈ ಕಮಲದ ಮೇಲೆ ಚಕ್ರಾಕಾರವಾಗಿರುವ ಒಂದು ಪೀಠವಿದೆ. ಈ ಪೀಠ ಸುಮಾರು ಒಂದು ಅಡಿ ಎತ್ತರವಾಗಿಯೂ 2 ಅಡಿ 10 ಅಂಗುಲ ಸುತ್ತಳತೆಯಿಂದಲೂ ಕೂಡಿದೆ. ಈ ಪೀಠದಲ್ಲಿ ನಾಲ್ಕು ದಿಕ್ಕಿಗೂ ನಾಲ್ಕು ಚಕ್ರಗಳು ಮತ್ತು ಪ್ರತಿ ಎರಡು ಚಕ್ರಗಳ ಮಧ್ಯೆ ಒಂದೊಂದರಂತೆ ಆನೆ, ವೃಷಭ, ಕುದುರೆ, ಸಿಂಹ-ಈ ನಾಲ್ಕು ಪ್ರಾಣಿಗಳನ್ನು ಕೆತ್ತಲಾಗಿದೆ. ಈ ಪೀಠದ ಮೇಲ್ಭಾಗದಲ್ಲಿ ಒಂದೊಂದು ಚಕ್ರದ ಮೇಲೂ ಒಂದೊಂದು ಸಿಂಹದಂತೆ ನಾಲ್ಕು ದಿಕ್ಕುಗಳಿಗೂ ಮುಖ ಮಾಡಿ, ಬಾಯಿತೆರೆದಿರುವ ನಾಲ್ಕು ಸಿಂಹಗಳು ಬೆನ್ನಿಗೆ ಬೆನ್ನುಕೊಟ್ಟು ನಿಂತಿವೆ. ಪ್ರತಿಯೊಂದು ಸಿಂಹವೂ 3 ಅಡಿ 9 ಅಂಗುಲ ಎತ್ತರವಾಗಿದೆ. ಅಲ್ಲಿ ದೊರಕಿರುವ ಇನ್ನೂ ಕೆಲವು ಅವಶೇಷಗಳ ಆಧಾರದ ಮೇಲೆ ಸಿಂಹಶೀರ್ಷಕ್ಕೆ ಶಿಖರವಾಗಿ ಇನ್ನೊಂದು ದೊಡ್ಡ ಶಿಲಾಚಕ್ರವನ್ನು ನಾಲ್ಕು ಸಿಂಹಗಳ ನಡುವೆ ನೇರವಾಗಿ ನಿಲ್ಲಿಸಲಾಗಿತ್ತೆಂದು ವಿದ್ವಾಂಸರು ನಂಬಿದ್ದಾರೆ. ಪೀಠದಲ್ಲಿ ಕಡೆದಿರುವ ಪ್ರತಿಯೊಂದು ಚಕ್ರದಲ್ಲೂ 24 ಅರಗಳು ಇವೆ. ಮೇಲಿನ ಚಕ್ರದಲ್ಲಿ 32 ಅರಗಳಿದ್ದುವೆಂದು ತಿಳಿದು ಬಂದಿವೆ. ಚಕ್ರ ಸಂಕೇತಸೂಚಕವೆಂದೂ ಅದಕ್ಕೆ ವಿಶಿಷ್ಟವಾದ ಅರ್ಥವಿದೆಯೆಂದೂ ವಿದ್ವಾಂಸರು ನಂಬಿದ್ದಾರೆ. ಮೇಲಿನ ಮಹಾಚಕ್ರದ 32 ಅರಗಳು ಮಹಾಪುರುಷರಾದವರ 32 ಪುರುಷಲಕ್ಷಣಸೂಚಕವೆಂದೂ ಸಿಂಹಪೀಠದಲ್ಲಿನ ಚಕ್ರಗಳ 24 ಅರಗಳು ಕಾಲಗಣನೆಗೆ ಮಾನವಾದ ಸಂವತ್ಸರದ 24 ಪಕ್ಷಗಳನ್ನು ಸೂಚಿಸುವುದೆಂದೂ ಜ್ಞಾನಿಯಾದವ ಸದಾ ಕಾಲದಲ್ಲೂ ಎಚ್ಚರವಾಗಿರಬೇಕೆಂದೂ ಈ ಧರ್ಮಚಕ್ರ ಸದಾ ಜ್ಞಾಪಿಸುತ್ತಿರುತ್ತದೆ ಎಂದೂ ನಂಬಲಾಗಿದೆ. ಧರ್ಮಚಕ್ರಗಳನ್ನೊಳಗೊಂಡ ಪೀಠದ ಮೇಲಿರುವ ಪ್ರಾಣಿಗಳು ಬುದ್ಧದೇವನ ಹಿಂದಿನ ಜನ್ಮಗಳ ಸಂಕೇತವೆಂದು ಬೌದ್ಧಜಾತಕಗಳಿಂದ ತಿಳಿದುಬರುತ್ತದೆ. ಅಲ್ಲದೆ ಭಾರತೀಯ ಸಂಪ್ರದಾಯದಲ್ಲಿ ಚಕ್ರಕ್ಕೆ ಬ್ರಹ್ಮಾಂಡಚಕ್ರ, ಭವ ಚಕ್ರ, ಕಾಲಚಕ್ರ, ಧರ್ಮಚಕ್ರ, ಸುದರ್ಶನಚಕ್ರ ಮುಂತಾದ ಹಲವಾರು ಸಾಂಕೇತಿಕ ನಿರೂಪಣೆಗಳಿವೆ. ಬೌದ್ಧ ಪುರಾಣಗಳಲ್ಲಿ ಧರ್ಮಚಕ್ರಕ್ಕೆ ಸಂಬಂಧಿಸಿದ ವ್ಯಾಖ್ಯಾನಗಳು ಹೇರಳವಾಗಿ ದೊರೆಯುತ್ತವೆ. ದಿವ್ಯಜ್ಞಾನವನ್ನು ಬುದ್ಧಗಯೆಯ ಬಳಿಯಲ್ಲಿ ಪಡೆದ ಅನಂತರ ಬುದ್ಧ ಧರ್ಮಚಕ್ರವನ್ನು ಪ್ರವರ್ತಿಸುವುದಕ್ಕಾಗಿ ಕಾಶೀನಗರಕ್ಕೆ ಹೋಗುವುದಾಗಿ ಹೇಳಿದನಂತೆ. ಮತ್ತೊಂದು ಸಂದರ್ಭದಲ್ಲಿ ಬುದ್ಧ ಸ್ತ್ರೀಯಾಗಲಿ ಪುರುಷನಾಗಲಿ ಇಂಥ ಯಾನದಿಂದ ನಿರ್ವಾಣದ ಸಮೀಪಕ್ಕೆ ಹೋಗುವರು ಎಂಬುದಾಗಿ ಧರ್ಮಚಕ್ರದ ರೀತಿಯನ್ನು ಕುರಿತು ಹೇಳಿದನಂತೆ. ಕಳಿಂಗ ರಣರಂಗದ ಭೀಕರ ದೃಶ್ಯವನ್ನು ನೋಡಿದ ಸಾಮ್ರಾಟ್ ಅಶೋಕ ಬಹುವಾಗಿ ಮನನೊಂದ. ಇನ್ನು ಮುಂದೆ ಸಾಮ್ರಾಜ್ಯ ದಾಹಕ್ಕಾಗಿ ಯುದ್ಧ ಮಾಡುವುದಿಲ್ಲವೆಂದು ಸಂಕಲ್ಪ ಮಾಡಿದ. ಸಾಮ್ರಾಜ್ಯವನ್ನು ಅಶೋಕದತ್ತ ಒಯ್ಯಲು ಅದಕ್ಕಾಗಿ ತನ್ನ ಭೋಗ ಭಾಗ್ಯ ಸಂಪತ್ತು ಸರ್ವಸ್ವವನ್ನೂ ತ್ಯಾಗ ಮಾಡಿದ. ಭಗವಾನ್ ಬುದ್ಧನಿಂದ ಪ್ರಸಾರವಾದ ಧರ್ಮಕ್ಕೆ ಶರಣಾದ. ಅದರ ಪ್ರಸಾರಕ್ಕಾಗಿ ಇನ್ನೂ ಅನೇಕ ಕಾರ್ಯಕ್ರಮಗಳ ಜೊತೆಗೆ ಶಿಲಾಶಿಲ್ಪವನ್ನೂ ಧರ್ಮಲಿಪಿಯನ್ನೂ (ಶಾಸನ) ಆಚರಣೆಗೆ ತಂದ.

ಸಾರಾನಾಥ ಸ್ಮಾರಕದ ಶಿಲಾಶಿಲ್ಪದಲ್ಲಿರುವ ಧರ್ಮಚಕ್ರವನ್ನು ಭಾರತದ ರಾಷ್ಟ್ರೀಯ ಬಾವುಟಕ್ಕೆ ಅಳವಡಿಸಿಕೊಳ್ಳಲಾಗಿದೆ. ಪಂಡಿತ್ ಜವಹರಲಾಲ್ ನೆಹರು ಭಾರತ ರಾಜ್ಯಾಂಗ ಸಭೆಯ ಧ್ವಜ ವಿಚಾರವನ್ನು ಮಂಡಿಸುತ್ತ ಭಾರತದ ರಾಷ್ಟ್ರಧ್ವಜ ಅಡ್ಡಗಲವಾಗಿದ್ದು, ಕೇಸರಿ, ಬಿಳುಪು, ಹಸುರು ಬಣ್ಣಗಳಿಂದ ಕೂಡಿದ್ದು, ನಡುವಣ ಬಿಳಿಯ ಪಟ್ಟಿಯ ಮಧ್ಯಭಾಗದಲ್ಲಿ ಚರಕದ ಪ್ರತಿನಿಧಿಯಾಗಿ ಒಂದು ಚಕ್ರ ಸಾಗರನೀಲವರ್ಣದಲ್ಲಿ ಇರತಕ್ಕದ್ದು; ಈ ಚಕ್ರದ ರಚನೆ ಸಾರಾನಾಥದ ಅಶೋಕ ಸ್ತಂಭದ ಸಿಂಹಶೀರ್ಷದ ಪೀಠದಲ್ಲಿ ಕಾಣುವ ಚಕ್ರದ ಮಾದರಿಯಾಗಿರತಕ್ಕದ್ದು; ಚಕ್ರದ ಅಡ್ಡಳತೆ ಬಿಳಿಪಟ್ಟಿಯ ಅಗಲದಷ್ಟಿರತಕ್ಕದ್ದು; ಬಾವುಟದ ಅಗಲಕ್ಕೂ ಉದ್ದಕ್ಕೂ 2:3 ಪ್ರಮಾಣ ಇರತಕ್ಕದ್ದು ಎಂಬುದಾಗಿ 1947ರ ಜುಲೈ 22 ರಂದು ಘೋಷಿಸಿದರು.

ಅಶೋಕನ ಕಾಲದಲ್ಲಿ ಭಾರತದಲ್ಲಿ ಮೂಡಿದ್ದ ಐಕ್ಯ, ಶಾಂತಿ, ಸಮೃದ್ಧಿ-ಇವುಗಳು ಅವನ ಆಳ್ವಿಕೆಯ ಮೊದಲಾಗಲೀ ಅನಂತರವಾಗಲೀ ನಮ್ಮ ನಾಡಿನಲ್ಲಿ ಕಾಣಬಂದಿಲ್ಲ. ಸಕಲ ಜೀವಿಗಳ ಕಲ್ಯಾಣವೇ ತನ್ನ ಕರ್ತವ್ಯವೆಂದು ಬಗೆದಿದ್ದವನೆಂದರೆ ಪ್ರಾಚೀನ ಭಾರತದ ಯುಗಪುರುಷ ಅಶೋಕ. ಆಧುನಿಕ ಯುಗದ ಅಹಿಂಸಾ ಅಧ್ವರ್ಯು ಮಹಾತ್ಮ ಗಾಂಧೀಜಿ ಯವರ ನೇತೃತ್ವದಲ್ಲಿ ಸ್ವಾತಂತ್ರ್ಯವನ್ನು ಪಡೆದ ಭಾರತ ಅಶೋಕ ಚಕ್ರವನ್ನು ತನ್ನ ಧ್ವಜಚಿಹ್ನೆಯನ್ನಾಗಿ ಆರಿಸಿಕೊಂಡಿರುವುದು ಅತ್ಯಂತ ಉಚಿತವಾಗಿದೆಯಲ್ಲದೆ ಭಾರತದ ಧ್ಯೇಯ ಸದ್ಧರ್ಮಸ್ಥಾಪನೆ ಎಂಬುದನ್ನು ಈ ಚಿಹ್ನೆ ಸೂಚಿಸುತ್ತದೆ.

ಉಲ್ಲೇಖ 

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ರಾಷ್ಟ್ರೀಯ ಸಂಕೇತಗಳು
ಭಾರತ ಸರ್ಕಾರ
ಸುನೀಲ್‍ಕುಮಾರ್ ದೇಸಾಯಿ ನಿರ್ದೇಶನದಲ್ಲಿ ೧೯೯೦ರಲ್ಲಿ ಬಿಡುಗಡೆಯಾದ ಚಿತ್ರವೇ ಉತ್ಕರ್ಷ. ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಅಂಬರೀಶ್, ದೇವರಾಜ್‌ ಹಾಗೂ ವನಿತಾ ವಾಸು ಇದ್ದಾರೆ.

ಸಂಕ್ಷಿಪ್ತ ಚಿತ್ರಕಥೆ
ಈ ಚಿತ್ರದಲ್ಲಿ ದೇವರಾಜ್‌ ರಾಜೇಶ್ ಶರ್ಮಾ ಎಂಬ ನಗ್ನ ಚಿತ್ರಗಳ ರಚನಾಕಾರನ ಪಾತ್ರ ಮಾಡಿದ್ದಾರೆ. ಈತ ತನ್ನ ಹೆಂಡತಿಯ ಅಕ್ರಮ ಸಂಬಂಧವನ್ನು ಸಹಿಸಲಾರದೆ ಮಾನಸಿಕ ರೋಗಿಯಾಗಿರುತ್ತಾನೆ. ಆದರೆ ಸಮಾಜದಲ್ಲಿ ಸಭ್ಯ ವ್ಯಕ್ಥಿಯಂತಿರುತ್ತಾನೆ. ತನ್ನ ಹೆಂಡತಿಯನ್ನು ಕೊಂದ ನಂತರ ಇನ್ನೂ ಅನೇಕ ಹೆಣ್ಣು ಮಕ್ಕಳನ್ನು ಕೊಲ್ಲುತ್ತಾನೆ. ಈತ ಯಾವುದೇ ಹೆಣ್ಣನ್ನು ನಗ್ನವಾಗಿ ಕಂಡರೆ ಅಥವಾ ಜೋರಾಗಿ ನಗುತ್ತಿರುವುದನ್ನು ಕಂಡರೆ ಈತನೊಳಗಿರುವ ಮಾನಸಿಕ ರೋಗಿ ಎಚ್ಚೆತ್ತುಕೊಳ್ಳುತ್ತಾನೆ. ನಂತರ ಅವಳು ಒಂಟಿಯಾಗಿರುವಾಗ ಹೋಗಿ ಅವಳ ಮನೆಯಲ್ಲೇ ಅವಳನ್ನು ಅವಳ ಕೈಯಲ್ಲೇ ನಗ್ನವಾಗಿಸಿ ಅವಳನ್ನು ಜೋರಾಗಿ ನಗುವಂತೆ ಮಾಡಿ ಕುತ್ತಿಗೆ ಕೊಯ್ದು ಸಾಯಿಸುತ್ತಾನೆ. ಆದರೆ ಯಾವುದೇ ಬಲಾತ್ಕಾರ ನಡೆಸುವುದಿಲ್ಲ. ನಂತರ ಹೆಣದ ಸುತ್ತ ಹಾಡು ಹೇಳಿಕೊಂಡು ಕುಣಿಯುತ್ತಾನೆ. ಯಾವುದೇ ಸುಳಿವುಗಳಿಲ್ಲದ ಯಾವುದೇ ಉದ್ದೇಶವಿಲ್ಲದ ಸರಣಿ ಕೊಲೆಗಳ ಹಿಂದಿನ ರಹಸ್ಯವನ್ನು ಪೋಲೀಸ್ ಅಧಿಕಾರಿ (ಅಂಬರೀಶ್) ಹೇಗೆ ಬಯಲಿಗೆಳೆಯುತ್ತಾನೆ ಎಂಬುದನ್ನು ಅತ್ಯುತ್ತಮವಾಗಿ ಚಿತ್ರಿಸಿದ್ದಾರೆ. ದೇವರಾಜ್ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆ. ಅವಿನಾಶ್ ಸಣ್ಣ ಪಾತ್ರದಲ್ಲಿ ಅಭಿನಯಿಸಿದರೂ ಆ ಪಾತ್ರ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತದೆ. ಒಟ್ಟಿನಲ್ಲಿ ಸುನೀಲ್ ಕುಮಾರ್ ದೇಸಾಯಿ ಅತ್ಯುತ್ತಮ ಚಿತ್ರವೊಂದನ್ನು ನೀಡಿದ್ದಾರೆ.

ಪಾತ್ರವರ್ಗ

ಪೋಷಕ ಪಾತ್ರವರ್ಗ 

 ಕೆ. ವಿ. ಮಂಜಯ್ಯ
 ಪ್ರವೀಣ್
 ಅಭಿಲಾಷಾ
 ಅಂಜಲಿ
 ಅಖಿಲಾ
 ಸಿತಾರಾ
 ಅನುಪ್ರಿಯಾ
 ಅಮೃತಾ
 ವರಲಕ್ಷ್ಮಿ
 ಕಮಲಶ್ರೀ
 ಆಂಜನಪ್ಪ

ವರ್ಷ-೧೯೯೦ ಕನ್ನಡಚಿತ್ರಗಳು
ಅನುಕೂಲಕ್ಕೊಬ್ಬ ಗಂಡ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಎಂ.ಎಸ್.ರಾಜಶೇಖರ್ ನಿರ್ದೇಶಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ  ರಾಘವೇಂದ್ರ ರಾಜ್‍ಕುಮಾರ್ ಮತ್ತು  ವಿದ್ಯಾಶ್ರೀ ಇದ್ದಾರೆ. ಈ ಚಿತ್ರದ ಸಂಗೀತವನ್ನು  ಉಪೇಂದ್ರ ಕುಮಾರ್ ಸಂಯೋಜಿಸಿದ್ದಾರೆ. ಈ ಚಿತ್ರವು "ಜೋರೂ ಕಾ ಗುಲಾಮ್ " ಎಂಬ ಹಿಂದಿ ಚಿತ್ರದ ರೀಮೇಕ್ ಆಗಿದೆ.

ಪಾತ್ರವರ್ಗ

 ರಾಘವೇಂದ್ರ ರಾಜ್‍ಕುಮಾರ್
 ವಿದ್ಯಾಶ್ರೀ
 ಲೋಕೇಶ್
 ಗಿರಿಜಾ ಲೋಕೇಶ್
 ಪ್ರಕಾಶ್ ರೈ
 ಸುಧಾ ನರಸಿಂಹರಾಜು
 ಸುಂದರಶ್ರೀ
 ರೇಖಾ ದಾಸ್
 ಶ್ರೀದೇವಿ
 ಶ್ಯಾಮಸುಂದರ್

ಹಿನ್ನೆಲೆ ಸಂಗೀತ
ಈ ಚಿತ್ರದ ಎಲ್ಲ ಗೀತೆಗಳನ್ನು ಉಪೇಂದ್ರ ಕುಮಾರ್ ಸಂಯೋಜಿಸಿದ್ದಾರೆ.

ಚಿತ್ರಗೀತೆಗಳು

ವರ್ಷ-೧೯೯೦ ಕನ್ನಡಚಿತ್ರಗಳು
 ಶತದಿನೋತ್ಸವದ ಕನ್ನಡ ಚಿತ್ರಗಳು
ವರ್ಷ-೧೯೯೦ ಕನ್ನಡಚಿತ್ರಗಳು
ವರ್ಷ-೧೯೯೦ ಕನ್ನಡಚಿತ್ರಗಳು
ಆಟ ಬೊಂಬಾಟ ಚಿತ್ರವು 26/10/1990ರಲ್ಲಿ  ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಸಿ.ಗೌರಿಶಂಕರ್ರವರು ನಿರ್ದೇಶಿಸಿದ್ದಾರೆ. ಡಿ.ಕೆ.ಕೇಶವ ಪ್ರಸಾದ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು
 ಭಲೆ ಭಲೆ ಆಟ ಬೊಂಬಾಟ
-ಎಸ್.ಪಿ.ಬಿ
 ಕಾಳಿದಾಸನಂಜನೆ ಆಯ್ತು 
ಎಸ್.ಪಿ.ಬಿ, ಎಸ್.ಜಾನಕಿ
 ಇಟ್ಟರು ಇಟ್ಟರು ಗುರಿ ಇಟ್ಟರು 
ಎಸ್.ಪಿ.ಬಿ, ಮಂಜುಳ ಗುರುರಾಜ್
 ನೋಡಿ ಸೆರೆಯ ಮಾಯೆ 
ಮಂಜುಳ ಗುರುರಾಜ್
ವರ್ಷ-೧೯೯೦ ಕನ್ನಡಚಿತ್ರಗಳು
ಶಬರಿಮಲೆ ಸ್ವಾಮಿ ಅಯ್ಯಪ್ಪ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಸುಬ್ರಹ್ಮಣ್ಯಂ ಕುಮಾರ್  ಮತ್ತು ವಿ. ಸ್ವಾಮಿನಾಥನ್ ಅವರು  ನಿರ್ಮಿಸಿದ್ದು ರೇಣುಕಾಶರ್ಮ  ನಿರ್ದೇಶಿಸಿದ್ದಾರೆ.  ಇದರ ಪ್ರಮುಖ ಪಾತ್ರಗಳಲ್ಲಿ   ಶ್ರೀನಿವಾಸಮೂರ್ತಿ,  ಗೀತಾ ,  ಮಾಸ್ಟರ್ ಸಂಜಯ್    ಇದ್ದಾರೆ.

ಈ ಚಿತ್ರದ ಸಂಗೀತವನ್ನು ಕೆ.ವಿ. ಮಹದೇವನ್    ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂನಲ್ಲಿ ಇದೇ ಹೆಸರಿನಲ್ಲಿ, ತಮಿಳಿನಲ್ಲಿ ಮಣಿಕಂಡನ್ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು.

ಪಾತ್ರವರ್ಗ 

 ಮಣಿಕಂಠ ಶ್ರೀ ಸ್ವಾಮಿ ಅಯ್ಯಪ್ಪನಾಗಿ ಮಾಸ್ಟರ್ ಸಂಜಯ್

 ಶ್ರೀನಿವಾಸಮೂರ್ತಿ ಪಾಂಡ್ಯರಾಜನಾಗಿ

 ಗೀತಾ ಪಾಂಡುರಾಜನ ಮಡದಿಯಾಗಿ

 ಶ್ರೀಲತಾ

ಚಿತ್ರಸಂಗೀತ 
ಈ ಚಿತ್ರದ ಸಂಗೀತವನ್ನು  ಕೆ.ವಿ ಮಹದೇವನ್  ಸಂಯೋಜಿಸಿದ್ದಾರೆ. ಗೀತೆಗಳನ್ನು  ವಿಜಯ ನಾರಸಿಂಹ  ಮತ್ತು ಚಿ ಉದಯಶಂಕರ್  ರಚಿಸಿದ್ದಾರೆ.

ವರ್ಷ-೧೯೯೦ ಕನ್ನಡಚಿತ್ರಗಳು
ಶತದಿನೋತ್ಸವದ ಕನ್ನಡ ಚಿತ್ರಗಳು
ಚಾಲೆಂಜ್  ಕಾಮರಾಜ್ ನಿರ್ದೇಶಿಸಿದ 2012 ರ ಕನ್ನಡ ಚಲನಚಿತ್ರವಾಗಿದೆ, ಚಿತ್ರದಲ್ಲಿ ನಿಶಾನ್, ಸಂಜನಾ ಸಿಂಗ್, ಅಚ್ಯುತ್ ಕುಮಾರ್, ಹರೀಶ್ ರಾಜ್, ಸಂಜನಾ ಸಿಂಗ್, ಕಲಾಭವನ್ ಮಣಿ, ಜಯಪ್ರಕಾಶ್, ಮತ್ತು ರಿಯಾಜ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವನ್ನು ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಯಿತು, ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಅನುಕ್ರಮವಾಗಿ ಯಾರುಕ್ಕು ಥೇರಿಯುಮ್  ಮತ್ತು 120 ನಿಮಿಷಗಳು .  ಈ ಚಲನಚಿತ್ರವು ಅಮೇರಿಕದ ಚಲನಚಿತ್ರ Unknown (2006) ನ ರೂಪಾಂತರವಾಗಿದೆ.

ಕಥಾವಸ್ತು 
ಯುವಕರ ಗುಂಪೊಂದು ಕಾರ್ಖಾನೆಯಲ್ಲಿ ಬೀಗ ಹಾಕಲ್ಪಡುತ್ತದೆ. ಮರುದಿನ, ಅವರಲ್ಲಿ ಯಾರಿಗೂ ಏನೂ ನೆನಪಿಲ್ಲ.

ಪಾತ್ರವರ್ಗ 

 ಶಕ್ತಿ/ಮಾಧವನ್ ಪಾತ್ರದಲ್ಲಿ ನಿಶಾನ್
 ಸೂರಿ/ವಿಷ್ಣು ಪಾತ್ರದಲ್ಲಿ ಅಚ್ಯುತ್ ಕುಮಾರ್
 ಬಾಷಾ/ರಿಯಾಜ್ ಆಗಿ ಹರೀಶ್ ರಾಜ್
 ಬಾಷಾ/ಕನಿಕಾ, ರಿಯಾಜ್ ಅವರ ಪತ್ನಿಯಾಗಿ ಸಂಜನಾ ಸಿಂಗ್
 ಮನೋಜ್ ಪಾತ್ರದಲ್ಲಿ ದಿಲೀಪ್ ರಾಜ್
 ರಘು ಪಾತ್ರದಲ್ಲಿ ಕಲಾಭವನ ಮಣಿ
 ಉನ್ನಿಥಾನ್ ಪಾತ್ರದಲ್ಲಿ ಜಯಪ್ರಕಾಶ್
 ಫ್ರೆಡ್ಡಿಯಾಗಿ ರಿಯಾಜ್ ಖಾನ್
 ಧರ್ಮೇಂದ್ರ
 ತೀರ್ಥ
 ಅಕ್ಷತಾ
 ಮಮತಾ
 ಬಿರಾದಾರ್
 ಕೃಷ್ಣಮೂರ್ತಿ
 ವೆನ್ನಿರಾದೈ ಮೂರ್ತಿ

ರೇಣಿಗುಂಟಾ (2009) ಚಿತ್ರದಲ್ಲಿ ನಟಿಸಿದ ಸಂಜನಾ ಸಿಂಗ್, ಹರೀಶ್ ರಾಜ್ ಅವರ ಪ್ರೇಮಿಯ ಪಾತ್ರಕ್ಕೆ ಸಹಿ ಹಾಕಿದರು.  ಕನ್ನಡದ ನಟ ಹರೀಶ್ ರಾಜ್ ತಮಿಳು ಅವತರಣಿಕೆಯಲ್ಲಿ ಸ್ವತಃ ಡಬ್ಬಿಂಗ್ ಮಾಡಿದ್ದಾರೆ.

ಧ್ವನಿಮುದ್ರಿಕೆ 
ಧ್ವನಿಪಥವು ಕಣ್ಣನ್ ಸಂಯೋಜಿಸಿದ ಎರಡು ಹಾಡುಗಳನ್ನು ಒಳಗೊಂಡಿದೆ. 

 ಕನ್ನಡ ಆವೃತ್ತಿ

 ಚಾಲೆಂಜ್ ಬೇಕು
 ಎನ್ನೆ ಕುಡಿ

ವಿಮರ್ಶೆಗಳು 
ತಮಿಳು ಆವೃತ್ತಿಯು ಧ್ರುವೀಕರಿಸಿದ ವಿಮರ್ಶೆಗಳಿಗೆ ಬಿಡುಗಡೆಯಾಯಿತು ಆದರೆ ಕನ್ನಡ ಆವೃತ್ತಿಯು ಸಕಾರಾತ್ಮಕ ವಿಮರ್ಶೆಗಳಿಗೆ ಬಿಡುಗಡೆಯಾಯಿತು.

 ಕನ್ನಡ ಆವೃತ್ತಿ

"ಚಿತ್ರವು ನಿಧಾನಗತಿಯ ಆರಂಭವನ್ನು ತೆಗೆದುಕೊಳ್ಳುತ್ತದೆ ಆದರೆ ನಿರೂಪಣೆಯು ಆಸಕ್ತಿದಾಯಕವಾಗುತ್ತ ಚುರುಕಾಗುತ್ತದೆ ಮತ್ತು ಕ್ಲೈಮ್ಯಾಕ್ಸ್‌ನವರೆಗೂ ಅದು ನಿಮ್ಮನ್ನು ತೊಡಗಿಸಿಕೊಳ್ಳುತ್ತದೆ" ಎಂದು ಸಿಫಿ ಹೇಳಿದೆ.

ಉಲ್ಲೇಖಗಳು 

ಕನ್ನಡ ಚಲನಚಿತ್ರಗಳು
ವರ್ಷ-೨೦೧೨ ಕನ್ನಡಚಿತ್ರಗಳು
ಗಣೇಶನ ಮದುವೆ ಯು 1990 ರಲ್ಲಿ  ತೆರೆಕಂಡ ಕನ್ನಡ ಚಲನಚಿತ್ರ ವಾಗಿದ್ದು ಫಣಿರಾಮಚಂದ್ರ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅನಂತನಾಗ್ , ವಿನಯಾಪ್ರಸಾದ್, ಮುಖ್ಯಮಂತ್ರಿ ಚಂದ್ರು , ರಮೇಶ್ ಭಟ್ ಅವರುಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಅಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ತುಂಬಾ  ಯಶಸ್ವಿಯಾದ ಚಲನಚಿತ್ರವಾಗಿದ್ದು ಅತ್ಯುತ್ತಮವಾದ ಹಾಸ್ಯಪ್ರಧಾನ ಕನ್ನಡ ಚಲನಚಿತ್ರಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ.

ಪಾತ್ರವರ್ಗ 

 ಅನಂತನಾಗ್  ಮುಖ್ಯಪಾತ್ರವಾದ ಗಣೇಶ ಆಗಿ

 ವಿನಯಾ ಪ್ರಸಾದ್ ಆದಿಲಕ್ಷ್ಮಿ ಆಗಿ

 ಮುಖ್ಯಮಂತ್ರಿ ಚಂದ್ರು ರಮಣ ಮೂರ್ತಿ ಆಗಿ

 ರಮೇಶ್ ಭಟ್  ಶಾಸ್ತ್ರಿ ಆಗಿ —

 ವೈಶಾಲಿ ಕಾಸರವಳ್ಳಿ ಸತ್ಯಭಾಮ ಆಗಿ

 ಶಿವರಾಂ ಗೋವಿಂದರಾಯನಾಗಿ

 ಎಂ. ಎಸ್. ಉಮೇಶ್ —  ವಠಾರದ ಇನ್ನೊಬ್ಬ ವಾಸಿಯಾಗಿ

 ರತ್ನಾಕರ ವಾಮನಮೂರ್ತಿಯಾಗಿ

 ಸತ್ಯಭಾಮ  ಕನಕ ಆಗಿ

 ಅಂಜಲಿ ಸುಧಾಕರ್ ಅಭಿಲಾಶಾ ಆಗಿ

 ಸಿಹಿ ಕಹಿ ಚಂದ್ರು ಚಂದ್ರು ಪಾತ್ರದಲ್ಲಿ

 ಹೊನ್ನವಳ್ಳಿ ಕೃಷ್ಣ ಪರಮೇಶಿ ಆಗಿ.

 ಮಂಜುಮಾಲಿನಿ ಗಜಲಕ್ಷ್ಮಿಯಾಗಿ

 ಪ್ರಥ್ವಿರಾಜ್  ಪರಮೇಶಿಯ ತಂದೆಯಾಗಿ

 ವಿಷ್ಣುವರ್ಧನ್  ಅತಿಥಿ ಪಾತ್ರದಲ್ಲಿ ತಾವೇ ಆಗಿ

ಹಿನ್ನೆಲೆಸಂಗೀತ
ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ರಾಜನ್-ನಾಗೇಂದ್ರ ಜೋಡಿಯು ಒದಗಿಸಿದೆ.

ವರ್ಷ-೧೯೯೦ ಕನ್ನಡಚಿತ್ರಗಳು
ವರ್ಷ-೧೯೯೦ ಕನ್ನಡಚಿತ್ರಗಳು
ಶೃತಿ ಚಲನಚಿತ್ರವು ೧೯೯೦ಯಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದ್ವಾರಕೀಶ್ರವರು ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ನಟಿಸಿರುವವರು
 ಸುನಿಲ್ 
 ಶೃತಿ
 ಇಂದುಧರ್
 ಶ್ರೀವತ್ಸ
 ಶ್ರಿನಾಥ್

ಚಿತ್ರದ ಗೀತೆಗಳು
 ಕನ್ನಡ ತಾಯಿಯ ಮಕ್ಕಳು - ಎಸ್.ಎ.ರಾಜ್ ಕುಮಾರ್
 ಹಾಡೊಂದ ನಾ ಹಾಡುವೆನು - ಕೆ.ಜೆ.ಯೇಸುದಾಸ್
 ಚಿಲಿಪಿಲಿ ಎನ್ನುತ್ತಲಿ - ಮಂಜುಳ ಗುರುರಾಜ್
 ತಾಳಕ್ಕೆ ನಾವೆಲ್ಲಾ - ಎಸ್.ಪಿ.ಬಿ
 ಜನುಮ ಜನುಮದಲು - ಕೆ.ಜೆ.ಯೇಸುದಾಸ್, ಮಂಜುಳ ಗುರುರಾಜ್
 ಹೆಣ್ಣಿಗೆ ತಾಳಿ -  ಎಸ್.ಪಿ.ಬಿ
ವರ್ಷ-೧೯೯೦ ಕನ್ನಡಚಿತ್ರಗಳು
 ಮೌನ ಹೋರಾಟ , ಹೆಚ್.ಎ.ಎನ್.ಪ್ರಸಾದ್ ನಿರ್ದೇಶನ ಮತ್ತು ಮಂಜುನಾಥ್ ಹೆಗ್ಡೆ ನಿರ್ಮಾಣ ಮಾಡಿರುವ ೧೯೯೦ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತ್ಯಜಿತ್ , ಸುಂದರ ಕೃಷ್ಣ ಅರಸ್  ಮತ್ತು ತ್ರಿವೇಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ
ನಾಯಕ(ರು) =  ಸತ್ಯಜಿತ್
ನಾಯಕಿ(ಯರು) = ತ್ರಿವೇಣಿ
ಪೋಷಕ ನಟರು = ಸುಂದರ ಕೃಷ್ಣ ಅರಸ್

ಉಲ್ಲೇಖಗಳು
ವರ್ಷ-೧೯೯೦ ಕನ್ನಡಚಿತ್ರಗಳು
ನಿಗೂಢ ರಹಸ್ಯ - ಇದು 1990ರ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರವಾಗಿದೆ.  ಇದನ್ನು ಪೇರಾಲ ಅವರು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಶಂಕರ್ ನಾಗ್,  ಗೀತಾ ,  ವನಿತಾ ವಾಸು ಮತ್ತು ತಾರಾ ಪ್ರಮುಖ ಪಾತ್ರಗಳಲ್ಲಿದ್ದರು. ಚಿತ್ರಕ್ಕೆ ಸಂಗೀತವನ್ನು ಹಂಸಲೇಖ ಒದಗಿಸಿದರು. ಈ ಚಿತ್ರವು ಶಂಕರ್ ನಾಗ್ ಅವರ ಮರದ ನಂತರ ಬಿಡುಗಡೆ ಆಯಿತು. ಅವರ ಸೋದರ  ಅನಂತ್ ನಾಗ್ ಅವರು ಶಂಕರ್ ನಾಗ್ ಅವರ ಪಾತ್ರಕ್ಕೆ ಧ್ವನಿ ನೀಡಿದರು.

ಚಿತ್ರಕಥೆ
ಇಂಜಿನಿಯರ್ ಮೋಹನನು ಒಂದು ದೊಡ್ಡ ಕಟ್ಟಡ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಆದರೆ ಅವನು ಇರಬೇಕಾಗಿ ಬರುವ ಸ್ಥಳವು ನಿಗೂಢವಾಗಿ ಪರಿಣಮಿಸುತ್ತದೆ. ಅಲ್ಲಿ ಕೆಲವು ವಿಶೇಷ ದಿನಗಳಲ್ಲಿ ಯಾರಾದರೂ ಒಬ್ಬರು ಸುದೀರ್ಘ ವಿದ್ಯುತ್ ನಿಲುಗಡೆಯ ಸಂದರ್ಭದಲ್ಲಿ ಕಾಣೆಯಾಗುತ್ತಿರುತ್ತಾರೆ  ಮತ್ತು  ಕೆಲ ದಿನಗಳ ನಂತರ ಊರ ಹೊರಗಡೆ ಅವರ ಶವವು ಸಿಗುತ್ತಿರುತ್ತದೆ.  ಅಷ್ಟೇ ಅಲ್ಲದೆ ಒಂದು ದೆವ್ವ,ಒಂದು ದೆವ್ವದ ಮನೆ, ಕಾಣೆಯಾಗುವ ಜನರ ಗುಂಪು, ಮತ್ತು ಒಬ್ಬ ಶಕ್ತಿಶಾಲಿ ದೈತ್ಯ ಇವೆಲ್ಲ ಇವನಿಗೆ  ಎದುರಾಗುತ್ತವೆ. ಚಲನಚಿತ್ರದ ಉಳಿದ ಭಾಗವು ಮೋಹನನು ಸತ್ಯವನ್ನು ಹೀಗೆ ಬಯಲಿಗೆಳೆಯುತ್ತಾನೆ ಎಂಬುದನ್ನು ತೋರಿಸುತ್ತದೆ.

ಪಾತ್ರವರ್ಗ

ಶಂಕರ್ ನಾಗ್  ಮೋಹನ್ ಪಾತ್ರದಲ್ಲಿ (ಧ್ವನಿ ನೀಡಿದ್ದು ಅನಂತನಾಗ್)
ಗೀತಾ ದೀಪಾ ಮತ್ತು ರೂಪಾ ಆಗಿ ದ್ವಿಪಾತ್ರದಲ್ಲಿ
ವನಿತಾ ವಾಸು ರೋಹಿಣಿ ಪಾತ್ರದಲ್ಲಿ
ತಾರಾ
ದೊಡ್ಡಣ್ಣ
 ಸುಧೀರ್
ಕೆ.ಎಸ್. ಅಶ್ವಥ್
ಸದಾಶಿವ ಬ್ರಹ್ಮಾವರ್
 ರಮೇಶ್ ಭಟ್
 ಮೈಸೂರು ಲೋಕೇಶ್
 ಸಿಹಿ ಕಹಿ ಚಂದ್ರು
 ಉಮಾಶ್ರೀ
 ಕಾಮಿನಿ ಧರನ್
 ಲೋಹಿತಾಶ್ವ
 ರತ್ನಾಕರ್
 ಶೃಂಗಾರ ನಾಗರಾಜ್
 ಲಲಿತಾ
 ಸೀಮಾ
 ಕಲಾ
 ಬೇಬಿ ರಶ್ಮಿ
 ಬೇಬಿ ಲಕ್ಷ್ಮಿ
ಹಾಸ್ಟೆಲ್ ಸಂಜು
 ರಾಮಮೂರ್ತಿ
 ಶ್ರೀಶೈಲನ್
ರಾಮಚಂದ್ರ
 ಶ್ರೀಮತಿ ರಾಮಚಂದ್ರ 
ಚಿಕ್ಕಣ್ಣ
ರಮೇಶ್ ಪಂಡಿತ್

ಹಿನ್ನೆಲೆ ಸಂಗೀತ

ವರ್ಷ-೧೯೯೦ ಕನ್ನಡಚಿತ್ರಗಳು
ವರ್ಷ-೧೯೯೦ ಕನ್ನಡಚಿತ್ರಗಳು
ವರ್ಷ-೧೯೯೦ ಕನ್ನಡಚಿತ್ರಗಳು
ವರ್ಷ-೧೯೯೦ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೮೯ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ಗಿರಿಮಲ್ಲಿಗೆ ಎಂಬ ಚಿತ್ರವನ್ನು ಎಂ.ಎಸ್.ಮೊಹಮದ್ ಫಕ್ರುದ್ದೀನ್ ಎಂಬ ನಿರ್ದೇಶಕ್ರು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ೧೯೯೧ ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದಲ್ಲಿ ನಟಿಸಿರುವ ನಾಯಕ ವಿಜಯ್ ಕುಮಾರ್ ಮತ್ತು ನಾಯಕಿ ತ್ರಿವೇಣಿ. ಈ ಚಿತ್ರದ ನನಿರ್ಮಾಪಕರು ಎಂ.ಎಸ್.ಮೊಹಮದ್ ಫಕ್ರುದ್ದೀನ್. ಈ ಚಿತ್ರದ ಸಂಗೀತವನ್ನು ನೀಡಿರುವವರು ಎಂ.ರಂಗ ರಾವ್. ಈ ಚಿತ್ರದ ಸಂಗೀತ ಸಾಹಿತ್ಯಕ್ಕೆ ಮುಂತಾದ ಪುರಸ್ಕಾರಗಳು ಲಭಿಸಿವೆ.
ವರ್ಷ-೧೯೯೧ ಕನ್ನಡಚಿತ್ರಗಳು

ಪಾತ್ರ ವರ್ಗ
 ವಿಷ್ಣುವರ್ಧನ್ -ದ್ವಿಪಾತ್ರದಲ್ಲಿ - ಲಯನ್ ಜಗಪತಿರಾವ್[ವಕೀಲ,ನ್ಯಾಯಧೀಶ] ಮತ್ತು ರಾಜಾ (ಪೋಲೀಸ್ ಇನ್ಸ್ಪೆಕ್ಟರ್)
 ಲಕ್ಷ್ಮೀ - ಜಾನಕಿ
 ಭವ್ಯ
 ಮುಖ್ಯಮಂತ್ರಿ ಚಂದ್ರು
 ಅರವಿಂದ್
 ಸದಾಶಿವ ಸಾಲಿಯಾನ್ - ಹರಿಹರ ಪ್ರಸಾದ್
 ರಾಜಾನಂದ್ - ಪೋಲೀಸ್ ಕಮೀಷನರ್
 ಹಾರ್ಸ್ ಬಾಬು - ಇನ್ಸ್ಪೆಕ್ಟರ್ ಪ್ರತಾಪ್
 ಮೈಸೂರ್ ಲೋಕೇಶ್ - ಆಂತೋನಿ
 ಶಾಂತಮ್ಮ - ವಿಶಾಲ್ ತಾಯಿ
 ಪೃಥ್ವಿ - ವಿಶಾಲ್ವಿಷ್ಣುವರ್ಧನ್ ಚಲನಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
 ಶತದಿನೋತ್ಸವದ ಕನ್ನಡ ಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು

ಉಲ್ಲೇಖಗಳು
ವರ್ಷ-೧೯೯೧ ಕನ್ನಡಚಿತ್ರಗಳು
 ಶತದಿನೋತ್ಸವದ ಕನ್ನಡ ಚಿತ್ರಗಳು
ಅರಳಿದ ಹೂಗಳು ಚಿತ್ರವು ೧೫ ಫೆಬ್ರವರಿ೧೯೯೧ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ಪಾರ್ವತಮ್ಮ ರಾಜ್‍ಕುಮಾರ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು
 ಆಕಾಶ ಮೇಲಿದೆ - ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್
 ಕಾಮನ ಬಿಲ್ಲಲ್ಲಿ - ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್
 ನುಡಿಸುವೆ ಬಾಳಿ ಬಾ - ಎಸ್.ಪಿ.ಬಾಲಸುಬ್ರಮಣ್ಯಂ, ಮಂಜುಳ ಗುರುರಾಜ್
 ಇಲ್ಲ ಮಜ ಇಲ್ಲೆ ನಿಜ - ಎಸ್.ಪಿ.ಬಾಲಸುಬ್ರಮಣ್ಯಂ
 ಅತ್ತೆ ಮಗಳೆ - ಎಸ್.ಪಿ.ಬಾಲಸುಬ್ರಮಣ್ಯಂ
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ಕ್ರಮ ಚಿತ್ರವು ೩೧-೮-೧೯೯೦ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ಅಸ್ರಾರ್ ಅಬೀದ್‌ರವರು ನಿರ್ದೇಶಿಸಿದ್ದಾರೆ.  ಮೆಹರುನ್ನೀಸಾರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿರವರು ವಿಜಯಕಾಶಿ ನಾಯಕನ ಪಾತ್ರದಲ್ಲಿ ಮತ್ತು ತಾರ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ.  ದಾಮೋದರ್‌ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಚಿತ್ರದ ಹಾಡುಗಳು
 ಪ್ರೀತಿ ನೀಡುತ್ತಾ ಬೆಳಸಿದ - ಮಂಜುಳ ಗುರುರಾಜ್, ಜೈಪಾಲ್
 ಗಾಳಕ್ಕೆ ಸಿಲುಕಿ ಮೀನು - ಮಂಜುಳ ಗುರುರಾಜ್, ಜೈಪಾಲ್
ವರ್ಷ-೧೯೯೧ ಕನ್ನಡಚಿತ್ರಗಳು
ಸಿ.ಬಿ.ಐ ವಿಜಯ್, ಉಮಾಶಂಕರ್ ನಿರ್ದೇಶನ ಮತ್ತು ಕೆ.ವಿ.ಚಂದ್ರಿಕ ನಿರ್ಮಾಪಣ ಮಾಡಿರುವ ೧೯೯೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಗುಣಸಿಂಗ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ವಜ್ರಮುನಿ  ಮತ್ತು ಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಾತ್ರವರ್ಗ
ನಾಯಕ(ರು) =  ಪ್ರಭಾಕರ್
ನಾಯಕಿ(ಯರು) = ಚಂದ್ರಿಕ
ಅವಿನಾಶ್
ವಜ್ರಮುನಿ
ಶ್ರೀದೇವಿ

ಉಲ್ಲೇಖಗಳು
ವರ್ಷ-೧೯೯೧ ಕನ್ನಡಚಿತ್ರಗಳು
ಕದನ ಸಾಮಾನ್ಯವಾಗಿ, ಇಬ್ಬರು ಅಥವಾ ಹೆಚ್ಚು ಸಶಸ್ತ್ರ ಪಡೆಗಳು, ಅಥವಾ ಕಾದಾಳುಗಳ ನಡುವಿನ ಯುದ್ಧದಲ್ಲಿನ ಕಾಳಗದ ಶ್ರೇಣಿ ವ್ಯವಸ್ಥೆಯಲ್ಲಿ ಕದನವು ಒಂದು ಕಲ್ಪನಾತ್ಮಕ ಘಟಕ. ಒಂದು ಯುದ್ಧವು ಕೆಲವೊಮ್ಮೆ ಅನೇಕ ಕದನಗಳನ್ನು ಒಳಗೊಂಡಿರುತ್ತದೆ. ಕದನಗಳು ಸಾಮಾನ್ಯವಾಗಿ ಅವಧಿಯಲ್ಲಿ, ವಿಸ್ತೀರ್ಣದಲ್ಲಿ ಮತ್ತು ಪಡೆ ಬದ್ಧತೆಯಲ್ಲಿ ಸುನಿಶ್ಚಿತವಾಗಿರುತ್ತವೆ.

ಸೇನಾ ಕಾರ್ಯಾಚರಣೆಗಳು
ಯುದ್ಧ
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ಬಿ. ಆರ್. ಅಂಬೇಡ್ಕರ್
ವರ್ಷ-೧೯೯೧ ಕನ್ನಡಚಿತ್ರಗಳು
 ಶತದಿನೋತ್ಸವದ ಕನ್ನಡ ಚಿತ್ರಗಳುವಿಷ್ಣುವರ್ಧನ್ ಚಲನಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
 ಶತದಿನೋತ್ಸವದ ಕನ್ನಡ ಚಿತ್ರಗಳು
ರೆಡಿಮೇಡ್ ಗಂಡ - ಇದು 1991 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಶಂಕರ್ ಭಟ್ ಅವರು  ಬರೆದಿದ್ದು  ಸಾಯಿಪ್ರಕಾಶ್ ಅವರು   ನಿರ್ದೇಶಿಸಿದ್ದಾರೆ.  ಇದರ ಪ್ರಮುಖ ಪಾತ್ರಗಳಲ್ಲಿ   ಶಶಿಕುಮಾರ್ ,  ಮಾಲಾಶ್ರೀ    ಇದ್ದಾರೆ. 
ಈ ಚಿತ್ರದ ಸಂಗೀತವನ್ನು ಉಪೇಂದ್ರಕುಮಾರ್    ಸಂಯೋಜಿಸಿದ್ದಾರೆ.

ಪಾತ್ರವರ್ಗ 
 ಶಶಿಕುಮಾರ್ 
 ಮಾಲಾಶ್ರೀ 
 ಹೇಮಾ ಚೌಧರಿ
ದೊಡ್ಡಣ್ಣ
 ಸಿಹಿ ಕಹಿ ಚಂದ್ರು
 ರಥಸಪ್ತಮಿ ಅರವಿಂದ್
 ಗುರುಮೂರ್ತಿ 
ನರಸಿಂಹಮೂರ್ತಿ
 ಕೆ. ಡಿ. ವೆಂಕಟೇಶ್ 
ಕುಣಿಗಲ್ ನಾಗಭೂಷಣ  
ಎಮ್ ಎಸ್ ಕಾರಂತ್ 
ಡ್ಯಾನಿ 
 ಜಾನಿ 
ಎಂ ಎಸ್ ಉಮೇಶ್ 
 ಅನಂತರಾವ್ ಮಚ್ಚೇರಿ
 ಸುಧಾ ನರಸಿಂಹರಾಜು
 ಬ್ಯಾಂಕ್ ಜನಾರ್ಧನ್
 ಮುಖ್ಯಮಂತ್ರಿ ಚಂದ್ರು
 ವೈಶಾಲಿ ಕಾಸರವಳ್ಳಿ
 ಕಾಮಿನಿಧರನ್
ಮಾಸ್ಟರ್ ಸುನಿಲ್

ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ ೧೯೯೧ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾದ ನಾಯಕನ ಪಾತ್ರದಲ್ಲಿ ಕುಮಾರ್ ಬಂಗಾರಪ್ಪ ಅಭಿನಯಿಸಿದ್ದಾರೆ ಮತ್ತು ಅನುಷಾ ನಾಯಕಿಯ ಪಾತ್ರದಲ್ಲಿದ್ದಾರೆ.

ಸ್ವಾರಸ್ಯ
 ಭಾರತದ ಕ್ರಿಕೆಟ್ ಆಟಗಾರ ಜಿ.ಆರ್.ವಿಶ್ವನಾಥ್ ಈ ಚಿತ್ರದಲ್ಲಿ ನಟಿಸಿದ್ದಾರೆ

ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ಹಬ್ಬಗಳಿಗಾಗಿ ಗೌರಿ ಹಬ್ಬ, ಗಣೇಶ ಚತುರ್ಥಿ ನೋಡಿ

ಈ ಚಿತ್ರದ ನಿರ್ದೇಶಕರು ಫಣಿ ರಾಮಚಂದ್ರ ಮತ್ತು ನಿರ್ಮಾಪಕರು ವಿಶ್ವನಾಥ ಜಿ.

ವರ್ಷ-೧೯೯೧ ಕನ್ನಡಚಿತ್ರಗಳು
 ಶತದಿನೋತ್ಸವದ ಕನ್ನಡ ಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
ವರ್ಷ-೧೯೯೧ ಕನ್ನಡಚಿತ್ರಗಳು
೧೯೯೧ರಲ್ಲಿ ತಯಾರಾದ ಕನ್ನಡ ಚಲನಚಿತ್ರ. ವಿನೋದ್ ರಾಜ್ ಮತ್ತು ಶಿವರಂಜನಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ವರ್ಷ-೧೯೯೧ ಕನ್ನಡಚಿತ್ರಗಳು
ಕನ್ನಡ ಚಲನಚಿತ್ರಗಳು